ಶಿವಮೊಗ್ಗ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ-ಸಿಎಸ್.ಷಡಾಕ್ಷರಿ

 ಶಿವಮೊಗ್ಗ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ-ಸಿಎಸ್.ಷಡಾಕ್ಷರಿ



#ಜಿಲ್ಲಾಧಿಕಾರಿಗಳಾದ ಶ್ರೀ ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಕೆಳಗಿನ ಅಂಶಗಳನ್ನು ರಾಜ್ಯಾಧ್ಯಕ್ಷರು ಮತ್ತು ಶಿವಮೊಗ್ಗ ಅಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿಯವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕೆಳಕಂಡಂತೆ ತೀರ್ಮಾನಿಸಿತು. ಈ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ,ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ, ಡಿಡಿಪಿಐ ರಮೇಶ್, ಡಿ.ಹೆಚ್.ಓ ರಾಜೇಶ್ ಸುರಗೀಹಳ್ಳಿ- ಸಮಿತಿ ಸದಸ್ಯರಾದ ಕೃಷ್ಣಪ್ಪ-ಭದ್ರಾವತಿ, ಚಿನ್ನಪ್ಪ-ಶಿಕಾರಿಪುರ,ಪರಮೇಶ್ವರಪ್ಪ-ಸಾಗರ,ಸತೀಶ್-ತೀರ್ಥಹಳ್ಳಿ, ಮಂಜುನಾಥ್-ಸೊರಬ, ಕ್ರಷ್ಣಮೂರ್ತಿ-ಹೊಸನಗರ, ಜಿಲ್ಲಾ ಸಂಘದ ಕಾರ್ಯದರ್ಶಿ-ಶಾಂತರಾಜ್, ಉಪಾಧ್ಯಕ್ಷರಾದ-ಮಾರುತಿ ಹಾಗೂ ಶಶಿಕುಮಾರ್, ಶಿವರಾಯಪ್ಪನವರು ಉಪಸ್ಥಿತರಿದ್ದರು

1. ನೌಕರರ ಮೇಲಿನ ಹಲ್ಲೆಗೆ ಕಡಿವಾಣ. 

2.ಜಿಲ್ಲಾ ಹಂತದಲ್ಲಿನ  ಸಕ್ಷಮ ಪ್ರಾಧಿಕಾರಿಗಳು ಬಾಕಿ ಇರುವ ಪದೋನ್ನತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದು ಹಾಗೂ ಪ್ರತಿ 6 ತಿಂಗಳಿಗೊಮ್ಮೆ ಅರ್ಹ ನೌಕರರಿಗೆ ಪದೋನ್ನತಿ ನೀಡಲು ಕ್ರಮ.

3.ಕಾಲಮಿತಿ ವೇತನ ಬಡ್ತಿ, 15 ವರ್ಷಗಳ ಸ್ವಯಂಚಾಲಿತ ವೇತನ ಬಡ್ತಿ, 20,25 ಹಾಗೂ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ವಿಳಂಬವಿಲ್ಲದೆ ಶೀಘ್ರ ಇತ್ಯರ್ಥಪಡಿಸಲು ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಚನೆ.

4.ಅನುಕಂಪ ನೇಮಕಾತಿ,ಸಾಮಾನ್ಯ ಭವಿಷ್ಯ ನಿಧಿ ಮುಂಗಡಗಳು,ವೇತನ ಬಡ್ತಿ, ವೇತನ ಪಾವತಿಯಲ್ಲಿನ ವಿಳಂಬ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಮಂಜೂರು ಮಾಡಲು ಕ್ರಮಕೈಗೊಳ್ಳುವುದು.

5.ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ಅಧೀನದಲ್ಲಿ ಬರುವ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ಸ್ಥಳೀಯವಾಗಿ ಉದ್ಭವಿಸಬಹುದಾದ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸಭೆ ಆಯೋಜಿಸುವುದು.

6.ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಕೋವಿಡ್-19 ನಿರ್ವಹಣೆಗೆ ಶ್ರಮವಹಿಸಿ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ರಕ್ಷಣೆ ಕೊಡುವುದರ ಜೊತೆಗೆ ಗೌರವದಿಂದ ನಡೆಸಿಕೊಳ್ಳುವುದು.

7.ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಸ್ಥಾನದಲ್ಲಿರುವ ವಸತಿಗೃಹಗಳು ಶಿಥಿಲಗೊಂಡಿದ್ದು, ಅವುಗಳನ್ನು ದುರಸ್ಥಿಪಡಿಸಬೇಕಾಗಿರುತ್ತದೆ. ಹಾಗಾಗಿ ದುರಸ್ಥಿ ಕಾರ್ಯಕ್ಕೆ ತಗಲುವ ಕ್ರೂಢೀಕೃತ ಅನುದಾನ ಕೋರಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು.

8.ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ವಸತಿಗೃಹಗಳ ಕೊರತೆಯಿದ್ದು, ಸರ್ಕಾರಿ ನೌಕರರು ದುಬಾರಿ ಬಾಡಿಗೆ ಪಾವತಿಸಲು ಕಷ್ಟವಾಗುವುದರಿಂದ ಈಗಿರುವ ವಸತಿಗೃಹಗಳನ್ನು ದುರಸ್ಥಿಪಡಿಸುವುದರ ಜೊತೆಗೆ ಹೊಸ ವಸತಿಗೃಹಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು. 

9.ಶಿಕ್ಷಕರ ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಗುರುಭವನ ಇಲ್ಲದ ಕಾರಣ ಸಂಘದ ಮನವಿ ಮೇರೆಗೆ ಹೊಸ ಗುರುಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ರೂ. 2.00 ಕೋಟಿ ಅನುದಾನ ಮಂಜೂರಾಗಿದ್ದು, ಸೆಪ್ಟಂಬರ್ 5 ರಂದು ಭೂಮಿಪೂಜೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಡಿ.ಡಿ.ಪಿ.ಐ ರವರಿಗೆ ಸೂಚಿಸಲಾಯಿತು.

10.ಜಿಲ್ಲೆಯಲ್ಲಿರುವ ಬಹುತೇಕ ಪ್ರೌಢ/ಪ್ರಾಥಮಿಕ ಶಾಲೆ ಹಾಗೂ ಎಲ್ಲಾ ಆರೋಗ್ಯ ಸಮುದಾಯ/ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ಕಟ್ಟಡ/ನಿವೇಶನಗಳ ಖಾತೆಗಳು ಕ್ರಮಬಧ್ಧವಾಗಿರುವುದಿಲ್ಲ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇವುಗಳ ಇತ್ಯರ್ಥಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲು ತೀರ್ಮಾನಿಸಲಾಯಿತು.

11.ಕಟ್ಟಡದಲ್ಲಿ ಬಾಡಿಗೆ ಇರುವ ಕಚೇರಿಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವುದು ಹಾಗೂ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಬರುವ ಕೆಲವು ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬೇಡಿಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

12.ಅಧಿಕಾರಿ/ನೌಕರರ ಹಾಗೂ ಶಿಕ್ಷಕರ ಕೆಲಸವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ತರಬೇತಿಗಳನ್ನು ಆಯೋಜಿಸಲು ಡಯೆಟ್/ಡಿ.ಟಿ.ಐ ಅಧಿಕಾರಿಗಳ ಸಭೆ ಆಯೋಜನೆ.

13.ಸರ್ಕಾರಿ ಕಟ್ಟಡದ ಮೇಲೆ ಗಿಡಗಂಟೆಗಳು ಬೆಳೆದು ಶಿಥಿಲಗೊಂಡಿರುವ ಬಗ್ಗೆ ಅಧ್ಯಕ್ಷರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇವುಗಳ ಸ್ವಚ್ಛತೆಗೆ ಕ್ರಮವಹಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಯಿತು.

14.ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಏರ್ಪಡಿಸುವುದರ ಜೊತೆಗೆ ಸಭೆಯಲ್ಲಿ ಚರ್ಚಿಸಲಾದ ಅಂಶಗಳಿಗೆ ಎಲ್ಲ ಇಲಾಖಾ ಮುಖ್ಯಸ್ಥರು ಕಡ್ಡಾಯವಾಗಿ ಅನುಸರಣಾ ವರದಿಯನ್ನು ಸಲ್ಲಿಸುವುದು.

Comments

  1. ಸರ್ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಸರಕಾರಿ ನೌಕರರಿಗಾಗಿ ಕ್ಯಾಂಟೀನ್ ಅನ್ನು ಯಾವಾಗ ಪ್ರಾರಂಭಿಸುತ್ತೀರಿ ಸರ್?

    ReplyDelete
  2. Sri.. P Srinivas, Retired Scientific Assistant, of Virus Diagnostic Laboratory, Shivamogga, had been sanctioned 30 years time bond one year before his retirement from Directorate of Health & FW Services, B'lore, nearly 6-7 years back. He has submitted all the charges after retirement. He belongs to Schedule Tribe, still then bill has not been prepared by VDL in his duty period. So I kindly request your kindself to all the committee members, please look into the matter & do the needful sir.

    ReplyDelete

Post a Comment

Popular posts from this blog

ಶಿಕ್ಷಕರ ವರ್ಗಾವಣೆಗೆ ಒತ್ತಾಯ-ಸಿ.ಎಸ್. ಷಡಾಕ್ಷರಿ

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ-ಷಡಾಕ್ಷರಿ

ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿಎಸ್ ಷಡಕ್ಷರಿಯವರ ಒಂದು ವರ್ಷದ ಸಾಧನಾ ಪತದ ಕಿರುಹೊತ್ತಿಗೆ ಆನ್ಲೈನ್ ಮೂಲಕ ಬಿಡುಗಡೆ