ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ-ಷಡಾಕ್ಷರಿ



ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿಯವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಶಿಕ್ಷಕರಿಗೆ ದೊರಕಬಹುದಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಮಂಜೂರು ಮಾಡುವ ನಿಟ್ಟಿನಲ್ಲಿ ಚರ್ಚಿಸಿದರು.
      ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪರೀಕ್ಷತಾವಧಿ ಘೋಷಣೆ, ಕಾಲಮಿತಿ ವೇತನ/ಸ್ವಯಂಚಾಲಿತ ವೇತನ ಬಡ್ತಿ, ಪದೋನ್ನತಿ ಹಾಗೂ ಇಲಾಖಾ ವಿಚಾರಣೆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವ ಮೂಲಕ ಶಿಕ್ಷಕರು ಅಲೆದಾಡುವುದನ್ನು ತಪ್ಪಿಸಿ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಾಂತರಾಜ್, ಮೋಹನ್‍ಕುಮಾರ್, ಕೃಷ್ಣಮೂರ್ತಿ, ಪ್ರಸನ್ನ, ಉದಯಸಿಂಗ್, ಡಿಡಿಪಿಐ ರಮೇಶ್, ಶಿವರುದ್ರಯ್ಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಸ್ತಾಪಿತ ವಿಷಯಗಳು
  1. ಬಾಕಿ ಇರುವ ಅರ್ಹತಾ ಪರೀಕ್ಷಾವಧಿ ಪ್ರಸ್ತಾವನೆಗಳನ್ನು ಶೀಘ್ರ ಇತ್ಯರ್ಥಪಡಿಸುವುದು.
  2. ಸಾಮಾನ್ಯ ಭವಿಷ್ಯ ನಿಧಿ ಮುಂಗಡ ಮಂಜೂರಾತಿ ಕೋರಿ ಬರುವ ಅರ್ಜಿಗಳನ್ನು ಕೂಡಲೆ ಇತ್ಯರ್ಥಪಡಿಸುವ ಮೂಲಕ ಶಿಕ್ಷಕರಿಗೆ ಅನುಕೂಲ ಕಲ್ಪಿಸುವುದು.
  3. ಕಾಲಮಿತಿ ವೇತನ ಬಡ್ತಿ, ಸ್ವಯಂಚಾಲಿತ ವೇತನ ಬಡ್ತಿ ಹಾಗೂ ಹೆಚ್ಚುವರಿ ವೇತನ ಬಡ್ತಿ ಪ್ರಸ್ತಾವನೆಗಳನ್ನು ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೆ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದು.
  4. ಸುಮಾರು 6 ವರ್ಷಗಳಿಂದ ಗ್ರೂಪ್ ಡಿ ನೌಕರರು ಪದೋನ್ನತಿಯಿಂದ ವಂಚಿತರಾಗಿದ್ದು, ತಕ್ಷಣ ಗ್ರೂಪ್ ಡಿ ನೌಕರರಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು.
  5. ಇಲಾಖಾ ವಿಚಾರಣೆ ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ ಇರುವುದರಿಂದ ಇದರಿಂದ ಬಾಧಿತ ನೌಕರರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಕಾರಣ ಕೂಡಲೆ ಬಾಕಿ ಇರುವ ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸುವ ಮೂಲಕ ಬಾಧಿತ ನೌಕರರಿಗೆ ನ್ಯಾಯ ದೊಕಿಸಿಕೊಡುವುದು.
  6. ಪ್ರತಿ ವರ್ಷ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ, ವಿಳಂಬಕ್ಕೆ ಆಸ್ಪದವಿಲ್ಲದೆ ಎಲ್ಲಾ ವೃಂದದ ಶಿಕ್ಷಕ/ನೌಕರರಿಗೆ ಮುಂಬಡ್ತಿ ನೀಡುವುದು.

Comments

Popular posts from this blog

ಶಿಕ್ಷಕರ ವರ್ಗಾವಣೆಗೆ ಒತ್ತಾಯ-ಸಿ.ಎಸ್. ಷಡಾಕ್ಷರಿ

ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿಎಸ್ ಷಡಕ್ಷರಿಯವರ ಒಂದು ವರ್ಷದ ಸಾಧನಾ ಪತದ ಕಿರುಹೊತ್ತಿಗೆ ಆನ್ಲೈನ್ ಮೂಲಕ ಬಿಡುಗಡೆ